Tag Archives: visveshwarayya

ಅಭಿಯಂತರ ದಿನಾಚರಣೆ – ೨೦೨೩

ಕಾರ್ಯ ನಿಮಿತ್ತವಾಗಿ ಒಂದು ಸ್ಥಳದ  ತಪಾಸಣೆಗಾಗಿ  ಸರ್ ಎಂ ವಿಶ್ವೇಶ್ವರಯ್ಯ ಅವರನ್ನು ಕರೆದಿದ್ದರು .  ಆಗ ಅವರು  ಸುಮಾರು ಎಪ್ಪತೈದು  ವಸಂತಗಳನ್ನು ಕಂಡರೂ  ಅವರು  ಕಾಯಕದಲ್ಲಿ  ಇಪ್ಪತೈದರ  ತರುಣರಾಗಿದ್ದರು ಸರ್ ಎಂ ವಿ.  ಅವರ ಜೊತೆಗೆ ತರುಣರಾದ ಎಂ ಆರ್ ವರದರಾಜನ್ ಅವರು  ಜೊತೆಗಿದ್ದರು.  ಆ ತಪಾಸಣೆ ಮಾಡುವ ಸ್ಥಳದ ತಸು ಎತ್ತರದಲ್ಲಿದ್ದು ಅಲ್ಲಿಯವರೆಗೆ ಹೋಗುವುದು ಶ್ರೀಗಳಿಗೆ  ಬೇಡವೆಂದು ವರದರಾಜನ್ ಅವರು ತಿಳಿಸಿ ನಾನೆ ಹೋಗಿ ನೋಡಿಕೊಂಡು ಬಂದು ತಮಗೆ ವರದಿ ಒಪ್ಪಿಸುವೆ ಎಂದು ತಿಳಿಸುತ್ತಾರೆ. 

ಆಗ ಶ್ರೀಗಳು ” ನೀವು ಏರಬಲ್ಲಿರಿ ಅಲ್ಲವೇ? ” ಎಂದು ಕೇಳಿದರು. 

ವರದರಾಜನ್ ಅವರು ನಾನು  ” ಏರಬಲ್ಲೆ ”  ಎಂದು ಉತ್ತರಿಸಿದರು. 

“ನೀವು ಏರಬಲ್ಲಿರಿ ಎಂದರೆ ನಾನು ಏಕೆ ಏರಲಾರೆ ” ಎಂದು ಹೇಳಿದರು. 

ವರದರಾಜನ್  ಅವರು ಎಷ್ಟೇ ಬೇಡ ಎಂದು ಪ್ರಾರ್ಥಿಸಿದರೂ , ಸೀದಾ ತಪಾಸಣೆ ಮಾಡಬೇಕಾದ ಸ್ಥಳ ತಲುಪಿ , ಎಲ್ಲಾ ವಿವರಗಳನ್ನು ಪಡೆದು  , ಪರಿಶೀಲನೆ ಮಾಡಿ ಟಿಪ್ಪಣಿ ಮಾಡಿಕೊಂಡು, ತಮ್ಮ ವರದಿಯನ್ನು ಸರ್ಕಾರಕ್ಕೆ ನೀಡಿದರು. 

ತಮಗೆ ವಹಿಸಿದ ಕಾರ್ಯವನ್ನು ಅವರು ಈ ಇಳಿವಯಸ್ಸಿನಲ್ಲಿ ಬೇರೆಯವರಿಗೆ ವಹಿಸಬಹುದಿತ್ತು, ಬೇರೊಬ್ಬರ ವರದಿಗೆ ಅವರು ತೃಪ್ತರಾಗದೆ ತಾವೇ ನಿಂತು ವಿವರ ಪಡೆದರು. ತಮಗೆ ವಹಿಸಿದ ಕರ್ತವ್ಯಕ್ಕೆ ಎಂದು ದ್ರೋಹ ಬಗೆಯದೇ  ಕರ್ತವ್ಯ ನಿಷ್ಠೆ ಪಾಲನೆ ಮಾಡಿದರು.

ಇಂದು ಸರ್ ಎಂ ವಿ ಅವರ ಜನ್ಮ ದಿನ, ನಾವೆಲ್ಲ ಹೆಮ್ಮೆಯಿಂದ ಅಭಿಯಂತರ ದಿನಾಚರಣೆ ಎಂದು ಆಚರಿಸುತ್ತೇವೆ, ಅವರ ಜೀವನದಲ್ಲಿ  ಪಾಲಿಸಿದ  ಹಾಗು ಸಾಧಿಸಿದ ಆದರ್ಶಪಾಲನೆನ್ನು ನಾವೆಲ್ಲ ಸ್ಮರಿಸಿ , ಜೀವನದಲ್ಲಿ ಅಳವಡಿಸಿಕೊಳ್ಳೋಣ. 

ಸರ್ ಎಂ ವಿ ಬಗ್ಗೆ ಬರೆದ ಹಿಂದಿನ ಲೇಖನಗಳು ..
ಕಾಯಕ ಯೋಗಿಗೊಂದು ನಮನ
ಅಜಾತ ಶತ್ರುವಿಗೊಂದು ನಮನ
http://timepassri.blogspot.in/2014/09/blog-post_15.html
ನಮ್ಮ ನಾಡು, ನಮ್ಮ ಹೆಮ್ಮೆ – ಸಜ್ಜನರು – ೧
http://timepassri.blogspot.in/2012/11/blog-post_18.html
ಹೋಗಲಿ ಬಿಡು, ಇರಲಿ ಬಿಡು, ಅಗಲಿ ಬಿಡು
http://timepassri.blogspot.in/2013/10/blog-post_24.html
ಕನ್ನಂಬಾಡಿ ಪ್ರಾಜೆಕ್ಟ್ ಓಮ್ಮೆ ನೋಡಿ!!!
http://timepassri.blogspot.in/2013/09/blog-post_12.html
ನಾಯಕರಿಗೊಂದು ದಿಕ್ಸೂಚಿ…
http://timepassri.blogspot.in/2013/04/blog-post_25.html
ಅಭಿಯಂತರ ದಿನಾಚರಣೆ – ೧೫ ಸೆಪ್ಟೆಂಬರ್
http://timepassri.blogspot.in/2011/09/blog-post.html
ಅಭಿಯಂತರ ದಿನಾಚರಣೆ – ೨೦೨೧
http://timepassri.blogspot.com/2021/09/blog-post.html

                                                        ಅಭಿಯಂತರ ದಿನಾಚರಣೆ – ೨೦೨೨

                                           http://timepassri.blogspot.com/2022/09/blog-post.html

ಅಭಿಯಂತರ ದಿನಾಚರಣೆ – ೨೦೨೨

ಅಪ್ಪ್ರೈಸಲ್ ಎನ್ನುವ ಪದ ಕಾಯಕ ಯೋಗಿಗಳಾದ ವೃತ್ತಿಪರರಿಗೆ  ಸಂವತ್ಸರ ಪೂರ್ತಿ ಬೆವರು ಹರಿಸಿ ದುಡಿಮೆಯ  ಫಲಾಪೇಕ್ಷೆ ಇಲ್ಲವೇ  ಫಲಾಪೇಕ್ಷೆಯಿಲ್ಲದ  ಪ್ರತಿಫಲ ಎಂದರೆ ತಪ್ಪಾಗಲಾರದು ಕಾಯಕವೇ ಕೈಲಾಸ ಎನ್ನುವ ನಾಣ್ಣುಡಿ ಬದಲಿಗೆ ಅಪ್ಫ್ರೈಸ್ಸಲ್ ಕೈಲಾಸ  ಎನ್ನುವ ಮಟ್ಟಿಗೆ ಅಪ್ಪ್ರೈಸಲ್ ಪದಕ್ಕೆ ಪ್ರಾಮುಖ್ಯ ನೀಡಿದ್ದಾರೆ ನಮ್ಮ ವೃತ್ತಿಪರರು. ಅಪ್ಪ್ರೈಸಲ್  ಸಂದರ್ಭದಲ್ಲಿ ವರ್ಷ  ಪೂರ್ತಿ ದುಡಿದ  ಎಲ್ಲರನ್ನೂ ಸಮಾಧಾನ ಮಾಡಲು ಆಗುವುದಿಲ್ಲ ಅದರೆ ಅವರ ಕಾರ್ಯಕ್ಕೆ ಕನಿಷ್ಠ ಮೆಚ್ಚುಗೆ ಸೂಚಿಸಿ  ನೀವು ಇನ್ನೂ ಉತ್ತಮ ಪಡಿಸಿಕೊಳ್ಳಬಹುದು ಎಂದು ಹೇಳುವವರು ಬಹಳ ವಿರಳ ಪ್ರಭಂದಕನ ಅಚ್ಚು ಮೆಚ್ಚಿನವರಿಗೆ ಒಂದಿಷ್ಟು  ಉಳಿದಿದ್ದುಅಳಿದು ಉಳಿದವರಿಗೆ ಎಂಬಂತಾಗಿದೆ ಇಂದು.

ಹಿಂದೆ ನಮ್ಮ ಕನ್ನಡನಾಡಿನಲ್ಲಿ ಮಹನೀಯರೊಬ್ಬರು ಇದ್ದರು , ಅವರ ಜೊತೆಗೆ ಕೆಲಸ ಮಾಡುವುದೇ ಒಂದು ಸೌಭಾಗ್ಯಅವರ ಶಿಸ್ತಿನ ಜೀವನವೃತ್ತಿಪರತೆ,  ಕೌಶಲ್ಯ  ಹಾಗು ಸದಾ ತಮ್ಮೊಂದಿಗೆ ಕಾಯಕದಲ್ಲಿ ತೊಡಗುವ ಶ್ರಮ ಜೀವಿಗಳ ಬಗ್ಗೆ ತೋರುವ ಗೌರವ ಮತ್ತು ಅಭಿಮಾನ  ಪ್ರತಿಯೊಬ್ಬನು ಸಹ ನಾನು ಇಂತವರ ಜೊತೆ ಕೆಲಸ ಮಾಡಬೇಕು ಎಂದು ಅನಿಸುತ್ತಿತ್ತುಅಂತಹವರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನವರು ಅಗ್ರಗಣ್ಯರಾಗಿ  ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.  ಸರ್ ಎಂ ವಿ ಯವರ  ವೃತ್ತಿ ಜೀವನವನ್ನು  ಆದರ್ಶವಾಗಿಟ್ಟು ಕೊಂಡ  ಹಲವರು  ತಮ್ಮ ಜೀವನವನ್ನು ತುಕ್ಕು ಹಿಡಿಯಲು  ಹೋಗದೆ ,  ಜನರ ಕಲ್ಯಾಣಕ್ಕೆ ತೇದು ಹೋದರು.  ಅಂತಹವರಲ್ಲಿ ರಾಜ ಸೇವಾಸಕ್ತ  ಡಿ ಸಿ ಸುಬ್ಬರಾಯರು  ಸಹ ಒಬ್ಬರು.

ಸರ್ ಎಂ ವಿ ಅವರ ಕಚೇರಿ ದಿನಚರಿಯು ಬೆಳಗ್ಗೆ  ಗಂಟೆಯಿಂದ ಮಧ್ಯಾಹ್ನ  ಗಂಟೆಯವರೆಗೆ  ಮಧ್ಯದಲ್ಲಿ  ಬಿಡುವು ,ಮತ್ತೆ  ಗಂಟೆಯಿಂದ ರಾತ್ರಿ  ಗಂಟೆಯವರೆಗೆಕೆಲಸ ಹೆಚ್ಚಿದ್ದರೆ ಮುಗಿಯುವವರೆಗೆ ಭಾನುವಾರ , ಹಬ್ಬ  ಹರಿದಿನವೆನ್ನದೆ ದಣಿವರಿಯದೆ ಅವಿರತವಾಗಿ ನಡೆಯುತ್ತಿತ್ತುಶ್ರೀಗಳು ತಮ್ಮ ಕಚೇರಿಗೆ ಯಾರೇ ಬಂದರು  ಬಂದವರು  ಕುರ್ಚಿಯ ಮೇಲೆ  ಕುಳಿತ ಮೇಲೆಯೇ  ತಮ್ಮ ಸಮಾಚಲೋಚನೆಯನ್ನು ಮುಂದುವರಿಸುತ್ತಿದ್ದರು .  ದಿನಕ್ಕೆ ಕನಿಷ್ಠ ಹನ್ನೊಂದು ಗಂಟೆಗಳ ಕೆಲಸ ಇಂತಹ ಸರ್ಕಾರೀ ಕೆಲಸ ದೇವರ ಕೆಲಸ ಎಂದು ಶ್ರೀಗಳ ಜೊತೆ ಅವರ ಕಚೇರಿಯ  ನಾಲ್ವರು  ಆಪ್ತ ಸಹಾಯಕರು ಕೈಜೋಡಿಸುತ್ತಿದ್ದರು.  ಅವರಲ್ಲಿ ಡಿ ಸಿ ಸುಬ್ಬರಾಯರು  ಸಹ ಒಬ್ಬರುಹೆಚ್ಚಿಗೆ ಕೆಲಸ ಮಾಡಿಸಿಕೊಂಡ ಮೇಲೆ ಅವರಿಗೆ ಹೆಚ್ಚಿನ ಸಂಬಳ ನೀಡಬೇಕು ತಾನೇ.

ತಮ್ಮ ಜೊತೆಗೆ ಹೆಚ್ಚಿನ ಸಮಯ ಕೆಲಸ  ಮಾಡಿದ ನಾಲ್ವರು  ಸಹೋದ್ಯೋಗಿಗಗಳಿಗೆ  ಹೆಚ್ಚಿನಭತ್ಯೆ ನೀಡಬೇಕೆಂದು , ತಮಗೆ ನೀಡಲು ಆಗದಿದ್ದಲ್ಲಿ ನಮ್ಮ ಸಂಬಳದಿಂದ ಮುರಿದುಕೊಳ್ಳಬಹುದೆಂದು  ಮಹಾರಾಜರಲ್ಲಿ ಪ್ರಸ್ತಾಪಿಸುತ್ತಾರೆಆಗ ಮಹಾರಾಜರು  ಉದಾರ ಮನೋಭಾವದಿಂದ ಸರ್ಕಾರದ ವತಿಯಿಂದ  ನಾವು ನೀಡುತ್ತೇವೆ ಎಂದು ಶ್ರೀಗಳ ಮನವಿಯನ್ನು ಗೌರವಪೂರ್ವಕವಾಗಿ  ಪುರಸ್ಕರಿಸುತ್ತಾರೆ.

ಇದಲ್ಲದೆ ತಮ್ಮ ಜೊತೆ ಅತ್ಯಂತ ದಕ್ಷವಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಸಿಗಬೇಕಾದ ಗೌರವನ್ನು ಹಾಗು ಪುರಸ್ಕಾರವನ್ನುಅಗತ್ಯ ಬಿದ್ದಲ್ಲಿ ಅವರಿಗೆ ಕೆಲಸದಲ್ಲಿ ಬಡ್ತಿಯನ್ನು ನೀಡಿ ಇಲ್ಲವೇ ಶಿಫಾರಸು ಮಾಡಿ  ಹೆಚ್ಚು ದಕ್ಷತೆಯಿಂದ ಕಾಯಕದಲ್ಲಿ ತೊಡಗುವಂತೆ ಮಾಡುವುದು ಅವರ ವೃತ್ತಿ ಧರ್ಮವಾಗಿತ್ತು .

ಅಂದು ಸರ್ ಎಂ ವಿಶ್ವೇಶ್ವರಯ್ಯನವರು ಪಾಲಿಸುತ್ತಿದ್ದ ವೃತ್ತಿಧರ್ಮವನ್ನು ಅವರ ಸಹೋದ್ಯೋಗಿಗಳು ಸಹ ಪಾಲಿಸಿ ತಮ್ಮ ವೃತ್ತಿ ಧರ್ಮದಲ್ಲಿ ಅಳವಡಿಸಿಕೊಂಡರುಕಾಲಕಳೆದಂತೆ  ಕಾಲಚಕ್ರದಲ್ಲಿ ಬಹುಶ  ವೃತ್ತಿ ಪರತೆಯ ಕೊಂಡಿ ಬೇರ್ಪಟ್ಟಂತೆ ಕಂಡಿತೇ.  ಎಲ್ಲೋ  ಇಂದಿನ ವೃತ್ತಿಪರರು ಸಹ  ಸರ್ ಎಂ ವಿ ಯವರ ವೃತ್ತಿಪರತೆಯನ್ನು ಅಗತ್ಯವಾಗಿ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆ ಎದ್ದು ಕಾಣುವಂತೆ ಭಾಸವಾಗುತ್ತಿದೆ.

ಇಂದು ಸೆಪ್ಟೆಂಬರ್ ೧೫  ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನನಾವು  ಅಭಿಯಂತರ ದಿನಾಚರಣೆಯಾಗಿ ಆಚರಿಸುತ್ತೇವೆಹಾಗಾಗಿ ಕೇವಲ ಅಭಿಯಂತರ ದಿನ ಎಂದು ಆಚರಿಸದೆ ನಾವು ವೃತ್ತಿ ಪರರ ದಿನ ಎಂದು ಅವರ ಹಾಕಿಕೊಟ್ಟ ವೃತ್ತಿ ಧರ್ಮವನ್ನು ಪಾಲಿಸಿ ಕೊಂಡು ಹೋಗುವ ಅಗತ್ಯವಿದೆ.

ಸರ್ ಎಂ ವಿ ಬಗ್ಗೆ ಬರೆದ ಹಿಂದಿನ ಲೇಖನಗಳು ..
ಕಾಯಕ ಯೋಗಿಗೊಂದು ನಮನ
ಅಜಾತ ಶತ್ರುವಿಗೊಂದು ನಮನ
http://timepassri.blogspot.in/2014/09/blog-post_15.html
ನಮ್ಮ ನಾಡು, ನಮ್ಮ ಹೆಮ್ಮೆ – ಸಜ್ಜನರು – ೧
http://timepassri.blogspot.in/2012/11/blog-post_18.html
ಹೋಗಲಿ ಬಿಡು, ಇರಲಿ ಬಿಡು, ಅಗಲಿ ಬಿಡು
http://timepassri.blogspot.in/2013/10/blog-post_24.html
ಕನ್ನಂಬಾಡಿ ಪ್ರಾಜೆಕ್ಟ್ ಓಮ್ಮೆ ನೋಡಿ!!!
http://timepassri.blogspot.in/2013/09/blog-post_12.html
ನಾಯಕರಿಗೊಂದು ದಿಕ್ಸೂಚಿ…
http://timepassri.blogspot.in/2013/04/blog-post_25.html
ಅಭಿಯಂತರ ದಿನಾಚರಣೆ – ೧೫ ಸೆಪ್ಟೆಂಬರ್
http://timepassri.blogspot.in/2011/09/blog-post.html
ಅಭಿಯಂತರ ದಿನಾಚರಣೆ – ೨೦೨೧
http://timepassri.blogspot.com/2021/09/blog-post.html

ಅಭಿಯಂತರ ದಿನಾಚರಣೆ – ೨೦೨೧

ಒಮ್ಮೆ ಸರ್ ವಿಠಲದಾಸ್ ಥ್ಯಾಕರ್ಸ್ ಅವರ ತಮ್ಮನವರು  ಕಾರ್ಯನಿಮ್ಮಿತ್ತ ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವಿರುತ್ತದೆ. ಹಾಗಾಗಿ  ಅವರನ್ನು ನೋಡಿಕೊಳ್ಳಬೇಕೆಂದು, ಅವರಿಗೆ ಒಂದು ಬಂಗಲೆಯಲ್ಲಿ ವಸತಿಗೆ ವ್ಯವಸ್ಥೆ ಮಾಡಬೇಕೆಂದು ಲೇಡಿ ಥ್ಯಾಕರ್ಸ್ ಅವರು ಅವರ ಆತ್ಮೀಯರಾದ ಸರ್ ಎಂ ವಿಶ್ವೇಶ್ವರಯ್ಯನವರಿಗೆ ಪತ್ರವನ್ನು ಬರೆಯುತ್ತಾರೆ. ವಿಶ್ವೇಶ್ವರಯ್ಯನವರು ಮೊದಲೇ ಮೈಸೂರಿನ ದಿವಾನರಾದವರು ಹಾಗಾಗಿ ಅವರನ್ನು  ಅತ್ಯಂತ ಕಾಳಜಿಯಿಂದ   ಸರ್ ವಿಠಲದಾಸ್ ಥ್ಯಾಕರ್ಸ್  ಅವರ ತಮ್ಮನವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಅವರನ್ನು ಪುಣೆಗೆ ಬೀಳ್ಕೊಡುತ್ತಾರೆ. ಲೇಡಿ  ಥ್ಯಾಕರ್ಸ್ಆ ಅವರು ವಿಶ್ವೇಶ್ವರಯ್ಯನವರ ಕೈಯ್ಯಲ್ಲಿ ಸರ್ಕಾರವೇ ಇದೆ ಹಾಗಾಗಿ ಯಾವುದು ಒಂದು ಸರ್ಕಾರದ ಬಂಗಲೆ ಒದಗಿಸಿರುತ್ತಾರೆ ಎಂದು ಕೊಂಡು ಸುಮ್ಮನಾಗಿದ್ದರು. ಆದರೆ ಹಲವು ವರ್ಷಗಳ ನಂತರ ಅವರಿಗೆ ತಿಳಿಯಿತು. ಸರ್ಕಾರೀ ಬಂಗಲೆಯನ್ನು ಸಹ ಬಾಡಿಗೆಗೆ ತಗೆದುಕೊಂಡು, ಆ ಬಾಡಿಗೆಯನ್ನು ಸಹ ತಮ್ಮ ಕೈಯಿಂದ ಕೊಟ್ಟಿದ್ದರೆಂಬ ಸಂಗತಿ. 

ನಾವು ಅಧಿಕಾರದಲ್ಲಿರುವ  ಹಲವಾರು ವರ್ಗಗಳನ್ನು ನೋಡಿರ್ತೀವಿ, ಅವರಲ್ಲಿ ತಮ್ಮ ಅಧಿಕಾರ ದುರ್ಬಳಕೆ ಮಾಡಿರೋವವರೇ ಹೆಚ್ಚನ್ನು ಸಾಕ್ಷಾತ್ಕರಿಸಿರುತ್ತೇವೆ, ನಾವು ಸಹ ಕೆಲವೊಂದು ಕಡೆನೂ ಎಡುವಿರುತ್ತೇವೆ. ಇಂದು ಸೆಪ್ಟೆಂಬರ್ ೧೫ ಸರ್ ಎಂ ವಿ ಅವರ ಜನ್ಮ ದಿನ ನಾವೆಲ್ಲ ಅಂದರೆ ಭಾರತೀಯರು ‘ಅಭಿಯಂತರ ದಿನಾಚರಣೆ’  ಅಂತ ಆಚರಿಸುತ್ತೇವೆ . ಇಂದಾದರೂ ಇಲ್ಲವೇ ಮುಂದಾದರೂ ಸರ್ ಎಂ ವಿಶ್ವೇಶ್ವರಯ್ಯನವರು ಆದರ್ಶಗಳನ್ನು ಸ್ವಲ್ಪನಾದರೂ ಪಾಲನೆಮಾಡೋಣ.

ಲೇಡಿ ಥಾಕರ್ಸ್ ಅವರ ಬಗೆಗಿನ ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಸ್ಪರ್ಶಿಸಿ 

https://en.wikipedia.org/wiki/Vithaldas_Thackersey

ಸರ್ ಎಂ ವಿ ಬಗ್ಗೆ ಬರೆದ ಹಿಂದಿನ ಲೇಖನಗಳು ..
ಕಾಯಕ ಯೋಗಿಗೊಂದು ನಮನ
ಅಜಾತ ಶತ್ರುವಿಗೊಂದು ನಮನ
http://timepassri.blogspot.in/2014/09/blog-post_15.html
ನಮ್ಮ ನಾಡು, ನಮ್ಮ ಹೆಮ್ಮೆ – ಸಜ್ಜನರು – ೧
http://timepassri.blogspot.in/2012/11/blog-post_18.html
ಹೋಗಲಿ ಬಿಡು, ಇರಲಿ ಬಿಡು, ಅಗಲಿ ಬಿಡು
http://timepassri.blogspot.in/2013/10/blog-post_24.html
ಕನ್ನಂಬಾಡಿ ಪ್ರಾಜೆಕ್ಟ್ ಓಮ್ಮೆ ನೋಡಿ!!!
http://timepassri.blogspot.in/2013/09/blog-post_12.html
ನಾಯಕರಿಗೊಂದು ದಿಕ್ಸೂಚಿ…
http://timepassri.blogspot.in/2013/04/blog-post_25.html
ಅಭಿಯಂತರ ದಿನಾಚರಣೆ – ೧೫ ಸೆಪ್ಟೆಂಬರ್
http://timepassri.blogspot.in/2011/09/blog-post.html

ಅಭಿಯಂತರ ದಿನಾಚರಣೆ – ೧೫ ಸೆಪ್ಟೆಂಬರ್

ಆನಕೃ ಕರ್ನಾಟಕ ಕಂಡ ಅತ್ಯಂತ ಪ್ರಸಿದ್ಧ ಸೃಜನಶೀಲ ಸಾಹಿತಿ , ಆನಕೃರವರ ತಾತ ಕೃಷ್ಣಪ್ಪನವರ ಮನೆಯ ಹತ್ತಿರದ ಬೀದಿ ಲಾಂದ್ರದ ಕೆಳಗೆ ಒಬ್ಬ ವಿದ್ಯಾರ್ಥಿ ನಿತ್ಯವೂ ಕುಳಿತು ವಿದ್ಯಾಭ್ಯಾಸ ಮಾಡುತಿದ್ದ ,ಕೃಷ್ಣಪ್ಪನವರ ಧರ್ಮಪತ್ನಿ ಹುಡುಗನ ಮೇಲೆ ಕನಿಕರಪಟ್ಟು ಅವನನ್ನು ಮನೆಗೆ ಆಮಂತ್ರಿಸಿ ಅವನ ವಿದ್ಯಾಬ್ಯಾಸಕ್ಕೆ ಸಹಕರಿಸಿದರು , ಬಡ ಹುಡುಗ ಎಲ್ಲ ಪರೀಕ್ಷೆಯಲ್ಲಿ ಉತ್ತಮ ಗುಣಗಳೊಂದಿಗೆ ತೇರ್ಗಡೆ ಹೊಂದಿ ಶಾಲೆಯ ಮೆಟ್ಟಿಲು ಹತ್ತುತಿದ್ದ , ಆದರೆ ಕೃಷ್ಣಪ್ಪನವರ ಮಗ ವೆಂಕಟರಮಣ ಪರೀಕ್ಷೆಯಲ್ಲಿ ನಪಾಸುಗುತಿದ್ದ , ಇದಕ್ಕೆ ಅವರು ಬಡ ವಿದ್ಯಾರ್ಥಿಯ ಶ್ರದ್ದೆ , ಆದರ್ಶವನ್ನು ಎತ್ತಿ ಹಿಡಿದು , ಮಗನಿಗೆ ಆಕ್ಷೇಪಿಸಿದರು. ಅಂದಿನಿಂದ ಅ ಬಡ ವಿದ್ಯಾರ್ಥಿಗೆ ಕಿರುಕುಳ ಆರಂಭವಾಯಿತು , ಬಡ ಹುಡುಗ ಕಾಟ ತಾಳಲಾರದೆ ಮನೆಬಿಟ್ಟು ಹೋದ , ಅ ಬಡ ವಿದ್ಯಾರ್ಥಿಯೇ ಮುಂದೆ ವಿಶ್ವ ವಿಖ್ಯಾತ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಮುಂದೆ ಅವರು ಸಾಗಿದ ಹಾದಿ ,ಸಮೃದ್ದ ಮತ್ತು ಸುಂದರ ದೇಶವನ್ನು ಕಟ್ಟಿದ ಬಗೆ ಎಂಥವರಿಗೂ ರೋಮಾಂಚನ ಮಾಡುತ್ತದೆ .

ಇಂದು ೧೫ ಸೆಪ್ಟೆಂಬರ್ ಅವರ ಜನ್ಮ ದಿನ , ದೇಶ ಕಂಡ ಅತ್ಯುತ್ತಮ ಆಡಳಿತಗಾರ,ವಿಜ್ಞಾನಿ, ಅರ್ಥಶಾಸ್ತ್ರಜ್ಞ , ಕಲಾಭಿಮಾನಿ , ಶಿಕ್ಷಣ ತಜ್ಞ ಮತ್ತು ಅತ್ಯುತ್ತಮ ನಾಗರೀಕ, ಸಾಮಾಜಿಕ ಜೀವನದ ಎಲ್ಲ ರಂಗದಲ್ಲೂ ಊಹಿಸಲಾಗದ ಕೊಡುಗೆ ನೀಡಿದ ಮಹಾನ್ ವ್ಯಕ್ತಿ , ಅವರ ಸಾಧನೆಯೇ ನಮ್ಮ ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿ , ಎಂದು ಅವರ ಕಾರ್ಯಗಳು ಮತ್ತು ಜೀವನದ ಶ್ಯಲಿ ಬಗ್ಗೆ ಸ್ಮರಣೆ ಮಾಡುತ , ನಮ್ಮ ದೇಶದ ಬಗ್ಗೆ ಚಿಂತಿಸಿ , ನಾವು ಉತ್ತಮ ಸಮಾಜವನ್ನು ರೂಪಿಸಲು ನಮ್ಮಿಂದದ ಕಾರ್ಯಕ್ಕೆ ಅಣಿಗೊಳಿಸುವ.

ಮೂಲ ಸಂಗ್ರಹ : ಅ.ನ.ಕೃಷ್ಣರಾಯ , ಬರಹಗಾರನ ಬದುಕು (ಆತ್ಮ ಕತೆ)