Category Archives: ರಾಮಚಂದ್ರ ಹಣಮಂತ ದೇಶಪಾಂಡೆ

ನಮ್ಮ ನಾಡು ನಮ್ಮ ಹೆಮ್ಮೆ – ಸಿರಿಗನ್ನಡಂ ಗೆಲ್ಗೆ

ರಾ.ಹ. ದೇಶಪಾಂಡೆ

” ಸಿರಿಗನ್ನಡಂ ಗೆಲ್ಗೆ ” , ಈ ಸಪ್ತಕ್ಷಾರಿ ಮಂತ್ರವನ್ನು ಕೇಳದ ಕನ್ನಡಿಗನಿಲ್ಲ ಹಾಗೆ ಏನಿದು ”  ಸಿರಿಗನ್ನಡಂ ಗೆಲ್ಗೆ ” ಹಾಗೂ ಯಾರು ಮೊದಲು  ಈ ಮಂತ್ರವನ್ನು ಪಠಿಸಿದರು ಅಂತ ಪ್ರಶ್ನೆ ಸಹಜವಾಗಿ ಮನದಲ್ಲಿ ಮೂಡುತ್ತದೆ.

ರಾಮ ಚಂದ್ರ ಹಣಮಂತ ದೇಶಪಾಂಡೆಯವರು ತಾವು ಬರೆಯುತ್ತಿದ್ದ ಪತ್ರದ ಮೇಲ್ಭಾಗದಲ್ಲಿ  ಸಿರಿಗನ್ನಡಂ ಗೆಲ್ಗೆ ಎಂದು ಬರೆದು ನಂತರ ಮುಂದಿನ ಸಮಾಚಾರವನ್ನು ಬರೆಯುತ್ತಿದ್ದರು . ರಾ.ಹ. ದೇಶಪಾಂಡೆಯವರ “ಸಿರಿಗನ್ನಡಂ ಗೆಲ್ಗೆ” ಉಕ್ತಿಯಲ್ಲಿ ಬಳಸಿರುವ ಹಳಗನ್ನಡ ಭಾಷೆಯು ಕನ್ನಡದ ಪ್ರಾಚೀನತೆಯನ್ನು, ‘ಸಿರಿ’ಯು ಕನ್ನಡದ ಸಂಪತ್ತನ್ನು, “ಗೆಲ್ಗೆ” ಎಂಬುದು ಕನ್ನಡದ ಉಜ್ವಲ ಭವಿಷ್ಯವನ್ನು ಮೊಳಗಿಸುತ್ತದೆ ಎಂಬ ಅರ್ಥ.

ರಾ.ಹ. ದೇಶಪಾಂಡೆಯವರು ಎಂ ಎ ಪದವಿ ಪಡೆದ ಧಾರವಾಡದ ಮೊದಲ ವಿದ್ಯಾರ್ಥಿ, ಆಂಗ್ಲ ಅಧಿಕಾರಿ ಡಬ್ಲೂ ಏ ರಸೆಲ್ ಅವರ ಮಾರ್ಗದರ್ಶನದಲ್ಲಿ ಕನ್ನಡದ ಸೇವೆಗೆ ಮುಂದಾದ  ರಾ.ಹ. ದೇಶಪಾಂಡೆಯವರು ಮುಂಬೈ ಕರ್ನಾಟಕದಲ್ಲಿ ಮರಾಠಿ ಮತ್ತು ಉರ್ದು ಭಾಷೆಯ ದಾಳಿಗೆ ಸಿಕ್ಕು ತತ್ತರಿಸುತ್ತಿದ್ದ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಯಶಸ್ವಿಯಾದರು. ಕನ್ನಡವನ್ನು ಬೆಳೆಸುವ ಸಂಕಲ್ಪ ಮಾಡಿದ ಕನ್ನಡದ ಯುವಕರನ್ನು ಜಾಗೃತಗೊಳಿಸಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು. ನಾಡಿನ ಏಕೀಕರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಎಂ ಎ ತರಗತಿಗಳಿಗೆ  ಇಂಗ್ಲೀಷ ಮೊದಲ ಭಾಷೆಯಾಗಿತ್ತು, ವಿದ್ಯಾಲಯದಲ್ಲಿ  ಮರಾಠಿ ಮತ್ತು ಗುಜರಾತಿಯನ್ನು ಸೇರಿಸುವ ಪ್ರಸ್ತಾಪವಿದ್ದಾಗ , ದೇಶಪಾಂಡೆಯವರು ಮತ್ತು ಶಾಮರಾವ ವಿಠಲ ಕೈಕಿಣಿ ಅವರು  ಕನ್ನಡವನ್ನು ಸೇರಿಸುವಂತೆ ಅಗ್ರಹಪಡಿಸಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾದರು.

 ಕನ್ನಡ ಮತ್ತು ಕನ್ನಡಿಗರ ಏಳ್ಗೆಗಾಗಿ ಸತತವಾಗಿ ಶ್ರಮಿಸಿದರು ರಾ ಹ ದೇಶಪಾಂಡೆಯವರು. ” ಸಿರಿಗನ್ನಡಂ ಗೆಲ್ಗೆ ”  ಎಂಬ ಉಕ್ತಿಯನ್ನು ಸ್ಮರಿಸಿದ ಹಾಗೆ ರಾ.ಹ. ದೇಶಪಾಂಡೆಯವರನ್ನು ಒಮ್ಮೆ ಸ್ಮರಿಸೋಣ.