Monthly Archives: November 2019

ನನ್ನ ಬರಹ – ಪತ್ರಿಕಾ ಲೇಖನಗಳು – Bangalore Mirror(26th November 2019) – This-techie-not-only-teaches-coding-but-also-Kannada

this-techie-not-only-teaches-coding-but-also-kannada (November 26th 2019, Bangalore mirror, Page 8)

this-techie-not-only-teaches-coding-but-also-kannada (November 26th 2019, Bangalore mirror, Page 8)
Click Here for epaper


ನನ್ನ ಬರಹ – ಪತ್ರಿಕಾ ಲೇಖನಗಳು- ಪ್ರಜಾವಾಣಿ(ಮೆಟ್ರೊ ಪುರವಣಿ ನವೆಂಬರ್ ೯ ೨೦೧೯) – ಟೆಕಿಗಳಿಗೆ ಸಿಂಪಲ್‌ ಕನ್ನಡ

ಟೆಕಿಗಳಿಗೆ ಸಿಂಪಲ್‌ ಕನ್ನಡ

ಮಹನೀಯರ ಮೇರು ನುಡಿಗಳು – ೧೧

ನಾವು ಆಗಾಗ ಕೆಲವು ಗಾದೆಗಳನ್ನು  ನಾಣ್ಣುಡಿಗಳನ್ನು ತಮ್ಮ ನಮ್ಮ ಮಾತಿನ ಮಧ್ಯದಲ್ಲಿ ಬಳಸುತ್ತೇವೆ. ಆ ಸಮಯದಲ್ಲಿ ಹೆಚ್ಚಾಗಿ ಬಳಕೆ ಮಾಡುವುದು ಆಂಗ್ಲ ಭಾಷೆಯ ಸೂಕ್ತಿಗಳೆ. ಕಾರಣ ಇಷ್ಟೇ ನಮ್ಮ ಭಾಷಿಕರಲ್ಲಿ ಉತ್ತಮವಾದ ಸೂಕ್ತಿಗಳು, ಹಿತವಚನಗಳು ಇಲ್ಲವೆಂದು ನಮ್ಮ ಅರಿಕೆ. ನಿಮಗೆ ತಿಳಿದಿದೆಯೋ ಇಲ್ಲವೋ ನಮಲ್ಲಿ ಸಹ ಉತ್ತಮವಾದ ಸೂಕ್ತಿಗಳು ಸಹ ಇವೆ. ಬನ್ನಿ ಇವುಗಳನ್ನು ನಮ್ಮ ಮಿತ್ರರಿಗೆ ಪರಿಚಯಿಸೋಣ.ಇವೆಲ್ಲವುಗಳ ಮೂಲ ಕನ್ನಡ ದಿನಪತ್ರಿಕೆಗಳು, ಪುಸ್ತಕಗಳು, ಅಂತರ್ಜಾಲದ ಮಿಂಬಲೆಗಳು. ಹಾಗೂ ಹಿಂದಿನ ಮಹನೀಯರ ಮೇರು ನುಡಿಗಳಿಗಾಗಿ ಕೆಳಗಿನ ಮಿಂಬಲೆಯನ್ನು ಸ್ಪರ್ಶಿಸಿ.

ನಿರ್ಭಯವೂ ನಿಷ್ಪಕ್ಷಪಾತವು ಆದ ಜಗತ್ತಿನ ಅನ್ಸ್ವೇಷಣೆಯೇ ವಿಜ್ಞಾನ  
– ಸಿ‌ ವಿ ರಾಮನ್ 

ಭೌದ್ಧಿಕ ಸೌಂದರ್ಯವು ನಿಜಕ್ಕೂ ಎಲ್ಲ ಬಗೆಯ ಸೌಂದರ್ಯಗಳಿಗೂ ಮಿಗಿಲಾದುದು 
– ಸಿ.ವಿ.ರಾಮನ್‌

ಸಂಕ್ರಾಂತಿ ಎಂದರೆ ಸಣ್ಣ ಕ್ರಾಂತಿಯಲ್ಲ 

ಅದೊಂದು ದೊಡ್ಡ ಕ್ರಾಂತಿ
ಅಂದು ಸೂರ್ಯನ  ರಥ ಬದಲಿಸುತ್ತದೆ ಪಥ 
ಹೀಗಾಗಿ ಅದು SUN ಕ್ರಾಂತಿ 
-ಡುಂಡಿರಾಜ್
ಜನರಿಗೆ ತಮ್ಮ ಹಕ್ಕು ಹೊಣೆಗಾರಿಕೆಯ ಅರಿವು ಇಲ್ಲದೆ ಹೋದರೆ ಪ್ರಜಾಪ್ರಭುತ್ವ ಕೇವಲ ನಕಲಿ ಮಾಲು 

-ಗೋಪಾಲ ಕೃಷ್ಣ ಅಡಿಗ 

ಉತ್ಸಾಹ  ಅಭಿಮಾನ
 ಇರಲಿ  ನಿರಂತರ
ಮುಗಿದರೂ ನವಂಬರ
ಬರದಿರಲಿ ಕನ್ನಡಕ್ಕೆ ಬರ
-ಡುಂಡಿರಾಜ್
ಮಕ್ಕಳು, ನಾವು ಹೇಳುವುದನ್ನು ಕಲಿಯುವುದಿಲ್ಲ ,ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ
-ಖಲೀಲ್ ಗಿಬ್ರಾನ್
ಇನ್ನೊಬ್ಬರಿಗೆ ಅನ್ಯಾಯವಾಗದ ರೀತಿಯಲ್ಲಿ ಬದುಕುವುದು ಪರರಿಗೆ ಸುಖ ಕೊಡಲು ಬಾರದೇ ಹೋದರೆ ದುಖ ಕೊಡದೆ ಇರುವುದು
-ಶಿವರಾಮ ಕಾರಂತ
ಮಣ್ಣು ಬಿಟ್ಟು ಮಡಿಕೆಯಿಲ್ಲ , ತನ್ನ ಬಿಟ್ಟು ದೇವರಿಲ್ಲ
-ಶಿಶುನಾಳ ಶರೀಫ
ಕೊಲ್ಲಲು ಬಂದ ಅನ್ಯಭಾಷೆಗಳು ವಾತಾಪಿಗಳು ಉಂಡು ಬೆಳೆದಿದೆ ಕನ್ನಡ ಅಗಸ್ತ್ಯನಂತೆ ಎಲ್ಲವ ಜೀರ್ಣಿಸಿಕೊಂಡು
-ಬಿ ಆರ್ ಎಲ್
ಪ್ರಕೃತಿಯಂತೆ ಮನುಷ್ಯನು ಸಹ ಫಲಿಸದ ಹಳೆಯ ಕನಸುಗಳನ್ನು ಕಳೆದುಕೊಂಡು ಹೊಸದನ್ನು ನಿರ್ಮಿಸುವ ಹಳೆಯದನ್ನು ನವೀಕರಿಸುವ ಕಾರ್ಯದಲ್ಲಿ ತೊಡಗಬೇಕು
-ಚೊಕ್ಕಾಡಿ
ಒಂದು ಉದ್ಯಾನ ಹಾಗೂ ಗ್ರಂತಾಲಯವನ್ನು ಒಳಗೊಂಡಿದ್ದರೆ ಅಗತ್ಯವಿರುವ ಎಲ್ಲವನ್ನೂ ಒಳಗೊಂಡಂತೆ
-ಸಿಸಿರೋ
ರಸರುಚಿ ಬಲ್ಲವ ತಿಂಡಿಪೋತನಾಗಲಾರ
-ಎಪಿಕ್ಯೊರಾಸ್
ಸೋತವನಿಗೆ ಮಾತ್ರ ಗೆಲುವಿನ ಅವಕಾಶವಿರುತ್ತದೆ
-ದರಾ ಬೇಂದ್ರೆ
ನಾನು ನರಕದಲ್ಲಿಯೂ ಸಹ ಒಳ್ಳೆಯ ಪುಸ್ತಕಗಳನ್ನು ಸ್ವಾಗತಿಸುವೆ. ಅವು ಇದ್ದಲ್ಲಿ ಸ್ವರ್ಗ ತಂತಾನೇ ಹುಟ್ಟುತ್ತದೆ
-ರವೀಂದ್ರನಾಥ ಟ್ಯಾಗೋರ್
ನಾವೆಲ್ಲ ಒಂದೇ ಮನೆಯವರಣ್ಣ ತಮ್ಮದಿರು ನಮ್ಮೆಲ್ಲರನು ಪಡೆದುದೊಂದೆ ನಾಡಿನ ಬಸಿರು ಎಂದು ನಮಗೆ ಇನ್ನಾರೆದುರು
-ಮಾಸ್ತಿ ವೆಂಕಟೇಶ ಐಯ್ಯಂಗಾರ್
ತ್ಯಾಗವಿಲ್ಲದೆ ಪರಿಶ್ರಮವಿಲ್ಲದೆ ಉಣ್ಣುವುದು ಕದ್ದ ಅನ್ನ ಉಣ್ಣುವುದು ಸಮ
-ಭಗವದ್ಗೀತೆ
ದೇಹ ವಸ್ತುಗಳನ್ನು ಎಚ್ಚರವಾಗಿಯೂ ಶುದ್ಧವಾಗಿಯೂ ಕಾಪಾಡಿಕೊಳ್ಳುವುದೇ ದಿಟವಾದ ಯಜ್ಞ
-ವೇದ ಮಂತ್ರ
ಸಹಾಯ ಮಾಡುವ ಕೈಗಳು ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಲೇಸು
-ಹೀರೆಮಗಳೂರು ಕಣ್ಣನ್
ಜೀವನದಲ್ಲಿ ಭಯ ಪಡುವಂತದ್ದು ಏನೂ ಇಲ್ಲ ಹೆಚ್ಚು ತಿಳಿದುಕೊಂಡಷ್ಟೂ ಭಯ ಕಡಿಮೆಯಾಗುತ್ತದೆ
-ಮೇಡಂ ಕ್ಯೂರಿ
ಮನುಷ್ಯನನ್ನು  ಒಳ್ಳೆಯವನ್ನಾಗಿ ಮಾಡುವುದೇ ನಿಜವಾದ ಧರ್ಮ
-ನಾರಾಯಣ ಗುರು
ನಮ್ಮನ್ನು ಎಲ್ಲ ಮರೆವು ಪಾಪಗಳಿಂದ ಮುಕ್ತಗೊಳಿಸುವುದೇ ವಿದ್ಯೆ
-ಚಂದ್ರಶೇಖರ ಕಂಬಾರ
ಚಪ್ಪಾಳೆ ನನಗಲ್ಲ ನನ್ನೊಳಗಿನ ಸರಸ್ವತಿಗೆ
-ರಾಜಕುಮಾರ್
ಹೂವು ಬಲ್ಲಿಗೆ ದೀಪ, ಹಸಿರು ಬಯಲಿಗೆ ದೀಪ
ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ
ಮುತ್ತು ಕಡಲಿಗೆ ದೀಪ ಹಕ್ಕಿ ಗಾಳಿಗೆ ದೀಪ
ಗ್ರಹ ತಾರೆಗಳ ದೀಪ ಬಾನಿನಲ್ಲಿ
-ಕೆ ಎಸ್ ನರಸಿಂಹಸ್ವಾಮಿ
ಇತಿಹಾಸದುದ್ದಕ್ಕೂ ಸತ್ಯ ಪ್ರೇಮದ ದಾರಿ ಯಾವತ್ತಿಗೂ ಗೆದ್ದಿದೆ
-ಗಾಂಧೀಜಿ
ಸತ್ಯದಲಿ ಶಿವವಿಹುದು ಶಿವದಲ್ಲಿ ಸತ್ಯವಿದೆ
ಮೇಣೆರಡು ಸೌಂದರ್ಯದಲಿ ಲಿನವಾಗಿಹವು
-ಕುವೆಂಪು
ಸ್ವರ್ಗವೆಂದರೆ ಮತ್ತೇನು ಅಲ್ಲ ಯಾವಾಗಲೂ ಸಂತೋಷವಾಗಿ ಇರುವವರ ಮನಸ್ಸು
-ರಾಮಕೃಷ್ಣ ಪರಮಹಂಸ
ಒಳಿತನ್ನು ಸೇವಿಸಿ
ಒಳಿತನ್ನು ಯೋಚಿಸಿ
ಒಳಿತನ್ನೆ ಹರಡಿ
ಒಳಿತಾಗುವುದು
-ಕೆ ರತ್ನಪ್ರಭಾ
ಪರಿಪೋರ್ಣ ಮಹಿಳೆಯ ಪರಿಕಲ್ಪನೆ ಪರಿಪೋರ್ಣ ಸ್ವಾತಂತ್ರ್ಯ
-ವಿವೇಕಾನಂದ
ಬಂದ ಚೈತ್ರದ ಹಾಡಿತೆರೆದಿದೆ
ಬಣ್ಣ ಬೆಡಗಿನ ಮೋಡಿಗೆ
ಹೊಸತು ವರ್ಷದ  ಹೊಸತು  ಹರ್ಷದ
ಬೇವು ಬೆಲ್ಲದ ಬೀಡಿಗೆ
-ಜಿ ಎಸ್ ಎಸ್
ಮೊದಲು ಗುಣಗ್ರಾಹಕನಾಗು
ಆನಂತರ ಗುಣ ಗಾಯಕನಾಗು
ತದನಂತರ ಗುಣ ವಾಹಕನಾಗು
ಆಗ ನೀನಾಗುವೆ ಮಹಾವೀರನಂತೆ
-ಸಂತವಾಣಿ
ಒಳ್ಳೆಯದು ಉಳಿಯಬೇಕಾದರೆ ಕೆಟ್ಟವರೊಂದಿಗೆ ಹೋರಾಡಬೇಕು
-ಅನಕೃ
ಪುಸ್ತಕಗಳು ಪ್ರತಿಯೊಬ್ಬರ ಮನಸ್ಸಿಗೂ ಪರಾಗವನ್ನು ಹೊತ್ತೋಯ್ಯುವ ದುಂಬಿಗಳು
-ಜೇಮ್ಸ್ ರಸೆಲ್
ಎಲ್ಲ ನೈತಿಕ ಮೌಲ್ಯಗಳನ್ನು ಸೇರಿಸಿ ಎರಕ ಹೊಯ್ದ ಅತ್ಯಂತ ಉದಾತ್ತ ಮೌಲ್ಯವೆಂದರೆ ಪ್ರಾಮಾಣಿಕತೆ
-ಅಂಬೇಡ್ಕರ್
ನಡೆಯಲರಿಯದೆ ನುಡಿಯಲರಿಯದೆಲಿಂಗವ ಪೂಜಿಸಿ ಫಲವೇನು
-ಬಸವಣ್ಣ
ಜನ ನಡೆದಿದ್ದಾರೆ ಎಂದು ಸೇವ್ದ ಹಾದಿಯಲ್ಲಿ ಹೋಗದಿರಿ
ನಿಮ್ಮದೇ ಹೊಸಹಾದಿಯನ್ನು ಸೃಷ್ಟಿಸಿಕೊಂಡು ಮುನ್ನಡೆಯಿರಿ
-ಗೌತಮ ಬುದ್ಧ
ಶೇಷ್ಟ ಸತ್ಯವೆಂದರೆ ಪ್ರಾಮಾಣಿಕತೆ ಅತಿದೊಡ್ಡ ಸುಳ್ಳೆಂದರೆ ಅಪ್ರಾಮಾಣಿಕತೆ
-ಖಲೀಫಾ ಅಬೂಬಕರ್
ಆಸೆಗಾಳಾದವನು ಲೋಕಕ್ಕೆ ಅಳು
ಆಸೆಯನ್ನಾಳುವಗೆ ಲೋಕವೇ ಅಳು
-ಸುಭಾಷಿತ
ದೇವರನ್ನು ನೋಡಬೇಕಾದುದು ಪ್ರೀತಿಯ ರೋಪದಲ್ಲಿ
ಮಂದಿರ ಮಸೀದಿಯ ರೂಪದಲ್ಲಲ್ಲ
-ಕಬೀರ

ಪ್ರೀತಿಯನ್ನು ಯಾರು ಬಯಸುತ್ತಾರು
 ಅವರು ಮೊದಲು ಪ್ರೀತಿಯನ್ನು ನೀಡಬೇಕು – ಕಬೀರ 

ಹೊಸತನವೆ ಬಾಳು
ಹಲಸಿಕೆಯೆಲ್ಲ ಸಾವು ಬಿಡು
-ಡಿವಿಜಿ

ಗಾದೆ :

ಒಪ್ಪಿತದ ಮಾತು ತಪ್ಪಿಸಬಾರದು 


ಅಕ್ಕರೆಯಿಲ್ಲದ ಉಪ್ಪರಿಗೆ ತಿಪ್ಪೆಗಿಂತ ಕಡೆ 

ಉತ್ತು ಬಾಳುವವನ ಬದುಕು ಎತ್ತಲೂ ಲೇಸು

ಅಳಿಲು ಏರಿದರೆ ಅರಳಿಮರ ಅಲ್ಲಾಡಿತೆ 

ಅಜ್ಜ ಮದುವೆ ಎಂದರೆ ಎನಗೋ ಅಂದ 
ಉಂಡದ್ದು ಉಳಿಯುವುದಿಲ್ಲ
ಆಡಿದ್ದು ಉಳಿಯುತ್ತೇ

ನನ್ನ ಬರಹ – ಪತ್ರಿಕಾ ಲೇಖನಗಳು – ಒನ್ ಇಂಡಿಯಾ ಕನ್ನಡ – ಐಟಿ ಕಂಪನಿಯಲ್ಲಿ ಕನ್ನಡ ಡಿಂಡಿಮ ಕಾರಣ, ಸವಾಲುಗಳು