Category Archives: ಮಿಂಚುಳ್ಳಿ

ವಿಸ್ಮಯ ಜಗತ್ತು – ೪ – ಹೇಯ್, ಬುಲ್‌ ಬುಲ್‌ ಮಾತಾಡಕ್ಕಿಲ್ವಾ

” ಹೇಯ್, ಬುಲ್‌ ಬುಲ್‌ ಮಾತಾಡಕ್ಕಿಲ್ವಾ” ಅಂದಾಕ್ಷಣ, ತಕ್ಷಣ ನೆನಪಿಗೆ ಬರೋದೇ  ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಯಶಸ್ವೀ ಚಿತ್ರ ‘ನಾಗರಹಾವು’. ರೇಬಲ್ ಸ್ಟಾರ್ ಅಂಬರೀಶ್ ನಟಿ ಆರತಿಯನ್ನು ಅಡ್ಡಗಟ್ಟಿ ತನ್ನ ಕಡೆ  ಸೆಳೆಯಲು ಹೇಳಿದ ಮಾತಿದು. ಮುಂದೆ ಏನಾಯಿತು ನಿಮಗೆ ತಿಳಿದೇ ಇದೆ. ಅಂಬರೀಶ್ ರವರು ಆರತಿಯವರನ್ನು ಬುಲ್ ಬುಲ್ ಹಕ್ಕಿ ಹೋಲಿಸಿ ಮೇಲಿನ ಮಾತನ್ನು ಆಡುತ್ತಾರೆ.ಇಂದು ಇದೆ ಮಾತು ಪಡ್ಡೆ ಹುಡುಗರ ನಾಲಿಗೆಯ ಮೇಲೆ ಯಾವುದಾದರು ಹುಡುಗಿ ಎದುರಿಗೆ ಹೋದರೆ ಸಾಕು  ಅ ಹುಡುಗಿಯನ್ನು ಕುರಿತು ಹೇಳುವ ನುಡಿಗಟ್ಟು ಆಗಿದೆ .

ಒಂದು ಗಂಡು ಒಂದು ಹೆಣ್ಣನ್ನು ತನ್ನ ಕಡೆ ಆಕರ್ಷಿಸಲು ಏನೆಲ್ಲ ಮಾಡುತ್ತಾನೆ ಅಂತ ನಿಮಗೆ ತಿಳಿದೇ ಇದೆ. ನಿಮಗೆ ಅನುಭವವಿದ್ದಲ್ಲಿ  ನೀವು ಸಹ ಏನು ಮಾಡಿರುತ್ತೀರ ಅಂತ ಒಮ್ಮೆ ಫ್ಲಾಶ್ ಬ್ಯಾಕ್ ಗೆ ಹೋಗಿ ಬನ್ನಿ. ಹಾಗೆ ನಮ್ಮ ಪಕ್ಷಿಗಳ ಲೋಕದಲ್ಲಿ ಸಹ ಗಂಡು ಹೆಣ್ಣನ್ನು ಆಕರ್ಷಿಸಲು ಮಾಡುವ ಕಸರತ್ತುಗಳು ಮಾನವನನ್ನೇ ನಾಚಿಸುತ್ತವೆ. ಬನ್ನಿ ವಿಸ್ಮಯ ಜಗತ್ತಿನ ಇಂದಿನ ಲೇಖನವನ್ನು ಸವಿಯೋಣ.

ಸಾವಿರಾರು ಕಣ್ಣುಗಳ ಸರದಾರ , ನಮ್ಮ ರಾಷ್ಟ್ರ ಪಕ್ಷಿ ನವಿಲು ನಿಮಗೆ ತಿಳಿದೇ ಇದೆ . ಗಂಡು ನವಿಲು ಹೆಣ್ಣು ನವಿಲನ್ನು ಆಕರ್ಷಿಸಲು ಬಳಸುವ ಅಸ್ತ್ರವೇ ತನ್ನ ಆಕರ್ಷಕವಾದ ರೆಕ್ಕೆಗಳು, ಒಮ್ಮೆ ಗಂಡು ನವಿಲು ತನ್ನ ರೆಕ್ಕೆಗಳನ್ನು ಸಂಪೂರ್ಣ ಫ್ಯಾನ್ ಆಕಾರದಲ್ಲಿ ನಿಲ್ಲಿಸಿದಾಗ, ಹೆಣ್ಣು ನವಿಲಿಗೆ ಇಷ್ಟವಾದರೆ ಹೆಣ್ಣು ನವಿಲು ತನ್ನ ದೇಹವನ್ನು ಒಮ್ಮೆ ಜೋರಾಗಿ ಕುಣಿಸಿ ತನ್ನ ಸಮ್ಮತಿ ಸೂಚಿಸುತ್ತದೆ.

ನಾವು ಮತ್ತೊಬ್ಬರನ್ನು ಬಯ್ಯುವಾಗ ಬಳಸುವ ಪದ ಗೂಬೆ. ನಿಮಗೆ ಗೊತ್ತಾ ,ಯಾವಾಗಲು ಗೂಬೆಗಳಿಗೆ ಹೆಚ್ಚಾಗಿ ಭಯವೇ ಅವರಿಸಿರುತ್ತವೆ. ಗಂಡು ಗೊಬೆ ಹೆಣ್ಣು ಗೊಬೆಯನ್ನು ಆಕರ್ಷಿಸಲು ಆಹಾರವನ್ನು ಹೆಣ್ಣು ಗೂಬೆಯ ಸಮೀಪ ಇಡುತ್ತವೆ. ಹೆಣ್ಣು ಗೂಬೆಗೆ ಭಯ ಹೆಚ್ಚು. ಅದು ದೊರದಲ್ಲಿಯೇ ಇರುತ್ತದೆ.  ಹೆಣ್ಣು ಗೊಬೆ ತನ್ನ ಭಯವೆಲ್ಲ ನಿವಾರಣೆಯಾದ ಮೇಲೆ  ನಿಧಾನವಾಗಿ ಆಹಾರವನ್ನು ತಗೆದುಕೊಳ್ಳುತ್ತದೆ. ಹೀಗೆ ಗಂಡು ಹೆಣ್ಣನ್ನು ಆಕರ್ಷಿಸುತ್ತದೆ.  

ಇನ್ನು ಹಮ್ಮಿಂಗ್ ಬರ್ಡ್ ಪಕ್ಷಿಗಳನ್ನು ತಗೆದು ಕೊಳ್ಳೋಣ ,  ಹಮ್ಮಿಂಗ್ ಬರ್ಡ್ ಹಕ್ಕಿಗಳಲ್ಲಿ ಸಹ ಹೆಣ್ಣು ಗಂಡನ್ನು ಜೀವನ ಸಂಗಾತಿಯಾಗಿ ಸ್ವೀಕರಿಸುವ ಕ್ರಮ ಸಹ ನಮ್ಮನ್ನು ಅಚ್ಚರಿ ಮೂಡಿಸುತ್ತದೆ. ಹಮ್ಮಿಂಗ್  ಬರ್ಡ್ ಅಷ್ಟು ಸಮಾಜಮುಖಿ  ಪಕ್ಷಿಯಲ್ಲ. ಅದು ಗುಂಪಾಗಿ ವಾಸಿಸುವ ಸಂಪ್ರದಾಯ ಇಟ್ಟುಕೊಂಡಿಲ್ಲ. ಹೆಣ್ಣು ಹಕ್ಕಿ , ಗಂಡು ಹಕ್ಕಿಯನ್ನು ಆರಿಸಿ ಕೊಳ್ಳುವ ಸಂದರ್ಭದಲ್ಲಿ ಸುಮಾರು ೧೦೦ ಗಂಡು ಹಕ್ಕಿಗಳು ಒಂದು ಕಡೆ ಸೇರಿ ಕೊಳ್ಳುತ್ತವೆ. ಆಗ ಹೆಣ್ಣು ಹಕ್ಕಿ ಯಾವುದಾದರೂ ಗಂಡನ್ನು ಇಷ್ಟ ಪಟ್ಟರೆ. ಗಂಡು ಹಕ್ಕಿ ಆಕಾಶದಲ್ಲಿ ಹಾರಾಡುತ್ತ ಗಾಳಿಯಲ್ಲಿ ನರ್ತನ ಮಾಡಬೇಕು. ಆಗ ಗಂಡು ಹಕ್ಕಿ ಹೆಣ್ಣಿಗೆ ಒಲಿಯುತ್ತದೆ.

ರಾಜಹಂಸ ಪಕ್ಷಿಗಳಲ್ಲಿ ಸಹ ಹೆಣ್ಣು ಗಂಡನ್ನು ಆಯ್ಕೆ ಮಾಡುತ್ತದೆ. ಇಲ್ಲಿ ವಿಚಿತ್ರವೆಂದರೆ ಹೆಣ್ಣು ಗಂಡು ಜೊತೆಯಲ್ಲಿ  ಕೆಲ ಸಮಯ ಕಳೆಯುತ್ತವೆ, ಸಂತಾನವಾದರೆ ಸರಿ. ಇಲ್ಲದಿದ್ದರೆ ಹೆಣ್ಣು ರಾಜಹಂಸ ಮತ್ತೊಂದು ಗಂಡು ಹಕ್ಕಿಯನ್ನು ಹುಡುಕುತ್ತದೆ.

ಮಿಂಚುಳ್ಳಿ ಅಲಿಯಾಸ್ ಕಿಂಗ್ ಫಿಷರ್ ಪಕ್ಷಿಗಳಲ್ಲಿ ಹೆಣ್ಣು ಪಕ್ಷಿಗಳು ಗಂಡು ಪಕ್ಷಿಗಳಿಗೆ ಅಷ್ಟು ಸುಲಭವಾಗಿ ಒಲಿಯುವುದಿಲ್ಲವಂತೆ. ಅದಕ್ಕೊಂದು ಉದಾಹರಣೆ ಇಲ್ಲಿದೆ

ಒಮ್ಮೆ  ಒಂದು ಗಂಡು ಮಿಂಚುಳ್ಳಿ ನದಿಯ ದಡದಲ್ಲಿದ್ದ ಹೆಣ್ಣು ಮಿಂಚುಳ್ಳಿಯನ್ನು ಒಲಿಸಲು ಬಂದಿತು. ಅದೇ ಸಮಯಕ್ಕೆ ಇನ್ನೆರಡು ಗಂಡು ಮಿಂಚುಳ್ಳಿಗಳು  ಅಲ್ಲಿಗೆ ಆಗಮಿಸಿದವು. ಮೊದಲು ಬಂದ ಗಂಡು ಮಿಂಚುಳ್ಳಿ ಅಲ್ಲಿಗೆ ಬಂದಿದ್ದ ಇನ್ನೆರಡು ಗಂಡು ಮಿಂಚುಳ್ಳಿಗಳನ್ನು ಅಲ್ಲಿಂದ ಓಡಿಸಿದರೆ ಮಾತ್ರ ತನ್ನ ಲವ್ ಲೈಫ್ ಆರಂಭವಾಗಬಹುದೆಂಬ  ಆಶಯದೊಂದಿಗೆ ಅವುಗಳ ಜೊತೆ ಸಮರ ಹೊಡಿತು . ಕಡೆಗೂ  ತನ್ನ ಒಂದೆರಡು ರೆಕ್ಕೆ ಪುಕ್ಕಗಳನ್ನು ಕಳೆದುಕೊಂಡರು ವೀರಾವೇಶದಿಂದ ಹೋರಾಡಿ ಉಳಿದ ಎರಡು ಗಂಡು ಹಕ್ಕಿಗಳನ್ನು ಓಡಿಸಿತು.

ತನ್ನ ಪರಾಕ್ರಮವನ್ನು ಹೆಣ್ಣು ಮಿಂಚುಳ್ಳಿ ಮೆಚ್ಚಿದೆ ಎನ್ನುವ ಭಾವನೆಯಿಂದ ಗಂಡು ಹೆಣ್ಣು ಮಿಂಚುಳ್ಳಿ ಹತ್ತಿರ ಹೋದಾಗ. ಹೆಣ್ಣು ಮಿಂಚುಳ್ಳಿ ಅದರ ಕಡೆಗೆ ತಿರುಗಿಯೂ ನೋಡಲಿಲ್ಲ.

ಆದರೆ ಗಂಡು ಮಿಂಚುಳ್ಳಿ ತಾನು ಹೆಣ್ಣು ಮಿಂಚುಳ್ಳಿಯನ್ನು ಒಲಿಸಿ ಕೊಳ್ಳಲೇಬೇಕು ಎನ್ನುವ ಒಂದೇ ಹಠದೊಂದಿಗೆ  ತನ್ನ ಪ್ರಯತ್ನವನ್ನು ಮುಂದುವರೆಸಿತ್ತು.

ಗಂಡು ಮಿಂಚುಳ್ಳಿ ಶರವೇಗದಲ್ಲಿ ನೀರಿನ ಒಳಗೆ ಹಾರಿ ಒಂದು ಮೀನನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಹೆಣ್ಣು ಮಿಂಚುಳ್ಳಿಗೆ ಸಮರ್ಪಿಸಿತು. ಹೆಣ್ಣು ಮಿಂಚುಳ್ಳಿ ಯಾವುದೇ  ಭಾವನೆಯನ್ನು ವ್ಯಕ್ತಪಡಿಸದೆ ಸುಮ್ಮನೆ ಇರುವುದನ್ನು ಕಂಡ ಗಂಡು ಮತ್ತೆ ನೀರಿಗೆ ಜೀಗಿದು ಮತ್ತೊಂದು , ಮತ್ತೆ ಮಗದೊಂದು ಎಂಬಂತೆ  ೩೦ ಮೀನು ಹಿಡಿದು ಹೆಣ್ಣಿನ ಮುಂದೆ ಗುಡ್ಡೆ ಹಾಕಿತು. ಕಡೆಗೆ ಹೆಣ್ಣು ಮಿಂಚುಳ್ಳಿಗೆ ತೃಪ್ತಿಯಾಯಿತು. ಗಂಡು ಮಿಂಚುಳ್ಳಿ ತಂದ ಒಂದು ಮೀನನ್ನು ಹೆಣ್ಣು ಕಚ್ಚಿಕೊಂಡು ಹಾರ ತೊಡಗಿತು. ಗಂಡು ಮಿಂಚುಳ್ಳಿ ಅದನ್ನು ಹಿಂಬಾಲಿಸಿ ಅದರ ಸ್ನೇಹವನ್ನು ಸಂಪಾದಿಸಿತು

ಅಬ್ಬಾ  ಹಕ್ಕಿಗೆ ಕಾಳು ಹಾಕೋದು ಅಂದರೆ ಎಷ್ಟು ಕಷ್ಟ ಅಂತ ಈಗ ಗೊತ್ತಾಯ್ತ ?      

ನಿಮಗೆ ಗೊತ್ತ ಮಾನವ ಜನ್ಮದಲ್ಲಿ ಅತ್ಯಂತ ಸುಂದರ ಎಂದರೆ ಹೆಣ್ಣು,  ಹಾಗೆ  ಪಶು ಪಕ್ಷಿಗಳಿಗೆ ಇದು ಅನ್ವಯವಾಗುವುದಿಲ್ಲ. ಪ್ರಕೃತಿಯಲ್ಲಿ  ಗಂಡೇ ಸುಂದರ..