Monthly Archives: January 2019

ಮಹನೀಯರ ಮೇರು ನುಡಿಗಳು – ೧೦

ನಾವು ಆಗಾಗ ಕೆಲವು ಗಾದೆಗಳನ್ನು  ನಾಣ್ಣುಡಿಗಳನ್ನು ತಮ್ಮ ನಮ್ಮ ಮಾತಿನ ಮಧ್ಯದಲ್ಲಿ ಬಳಸುತ್ತೇವೆ. ಆ ಸಮಯದಲ್ಲಿ ಹೆಚ್ಚಾಗಿ ಬಳಕೆ ಮಾಡುವುದು ಆಂಗ್ಲ ಭಾಷೆಯ ಸೂಕ್ತಿಗಳೆ. ಕಾರಣ ಇಷ್ಟೇ ನಮ್ಮ ಭಾಷಿಕರಲ್ಲಿ ಉತ್ತಮವಾದ ಸೂಕ್ತಿಗಳು, ಹಿತವಚನಗಳು ಇಲ್ಲವೆಂದು ನಮ್ಮ ಅರಿಕೆ. ನಿಮಗೆ ತಿಳಿದಿದೆಯೋ ಇಲ್ಲವೋ ನಮಲ್ಲಿ ಸಹ ಉತ್ತಮವಾದ ಸೂಕ್ತಿಗಳು ಸಹ ಇವೆ. ಬನ್ನಿ ಇವುಗಳನ್ನು ನಮ್ಮ ಮಿತ್ರರಿಗೆ ಪರಿಚಯಿಸೋಣ.ಇವೆಲ್ಲವುಗಳ ಮೂಲ ಕನ್ನಡ ದಿನಪತ್ರಿಕೆಗಳು, ಪುಸ್ತಕಗಳು, ಅಂತರ್ಜಾಲದ ಮಿಂಬಲೆಗಳು. ಹಾಗೂ ಹಿಂದಿನ ಮಹನೀಯರ ಮೇರು ನುಡಿಗಳಿಗಾಗಿ ಕೆಳಗಿನ ಮಿಂಬಲೆಯನ್ನು ಸ್ಪರ್ಶಿಸಿ.
ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿ

ಧರ್ಮ ಅಧರ್ಮಗಳಲ್ಲಿನ ನಂಬುಗೆಗಿಂತ, ಅವರವರ ಭಕುತಿಗೆ ತಕ್ಕಂತೆ ಅವರವರ ಭಾವಕ್ಕೆ ತಕ್ಕಂತೆ ಅವರವರ ಭಾವಕ್ಕೆ ತಕ್ಕಂತೆ ನಡೆದುಕೊಳ್ಳುವುದನ್ನೇ ಧರ್ಮವಾಗಿಸಿಕೊಂಡಿದ್ದೇವೆ.
ಸಾಲಕ್ಕೆ ಬಡ್ಡಿ ಎನ್ನುವುದು ಕೃತಜ್ಞತೆಗಾಗಿ ಕೊಡುವ ಧನವಾಗಿರಬೇಕೇ ಹೊರತು, ಬಡವರ ರಕ್ತ ಹೀರುವ ಜಿಗಣೆಯಾಗಬಾರದು.
ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ, ಆದರಿಂದ ಪ್ರಸಾದ ಸೇವಿಸುವಾಗ ವ್ಯರ್ಥ ಮಾಡುವುದು ಶ್ರೇಯಸ್ಕರವಲ್ಲ.
ದೇಹಕ್ಕೆ ಹಸಿವಾದರೆ ಪ್ರಸಾದದ ಅಗತ್ಯವುಂಟು, ಹಾಗೆಯೇ ಮನಸ್ಸಿನ ಹಸಿವಿಗೆ ಪ್ರಾಾರ್ಥನೆಯ ಅಗತ್ಯವುಂಟು. ಪ್ರಸಾದ ಸೇವನೆಯಲ್ಲೂ, ಪ್ರಾಾರ್ಥನೆಯಲ್ಲೂ ಏಕಾಗ್ರತೆ ಅತ್ಯವಶ್ಯಕ.
ಪ್ರಪಂಚದಲ್ಲಿ ಧರ್ಮ ಯಾವುದು ಎಂದರೆ ಒಂದೇ ಧರ್ಮ, ಅದು ಮನುಷ್ಯ ಧರ್ಮ. ಕತ್ತಲಲ್ಲಿ ಇರುವವನನ್ನು ಬೆಳಕಿಗೆ ಕರೆಯುವುದು ಧರ್ಮ, ಅನ್ನವಿಲ್ಲದವನಿಗೆ ಅನ್ನವಿಕ್ಕುವುದು ಧರ್ಮ, ಬಾಯಾರಿದವನಿಗೆ ನೀರುಣಿಸುವುದು ಧರ್ಮ, ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು ಧರ್ಮವೇ ಪರಂತು ಧರ್ಮ ಗುಡಿ ಗುಂಡಾರಗಳಲ್ಲಿ ನೆಲೆಸಿಲ್ಲ.
ಜೀವನದಲ್ಲಿ ಒಳ್ಳೆಯ ಭವಿಷ್ಯ ಉಂಟಾಗಬೇಕಾದರೆ, ಗೌರವವಾದ ಬಾಳ್ವಿಕೆ ಉಂಟಾಗಬೇಕಾದರೆ ಕಾಲವನ್ನು ವ್ಯರ್ಥ ಮಾಡದೆ ಜ್ಞಾನ ಸಂಪಾದನೆ ಮಾಡಬೇಕು.
ಅನ್ನವೆಂದರೆ ಪ್ರಸಾದ, ಪ್ರಸಾದ ಚೆಲ್ಲಿದರೆ ಮುಂದಿನ ಜನ್ಮದಲ್ಲಿ ಅನ್ನ ದೊರೆಯುವುದಿಲ್ಲ 
***************************************************************
ರೈತರಾದವರು ಅಗತ್ಯವಿಲ್ಲದ ವಾಹನಗಳಿಂದ ದೂರವಿರಿ. ಅವು ನಿಮ್ಮನ್ನು ಸೋಮಾರಿಯಾಗಿಸುವುದರ ಜೊತೆಗೆ ಅರ್ಥವಿಲ್ಲದ ಪೇಟೆಯ ಗೀಳನ್ನು ಹಬ್ಬಿಸಿ ಹಣಗಳಿಕೆಯ ದುರಾಸೆಯನ್ನು ತಂದೊಡ್ಡಿ ನಿಮ್ಮನ್ನು ದೀನ ಸ್ಥಿತಿಗೆ ತಂದು ಕೆಡುವುತ್ತವೆ. ಸಂದರ್ಭವಿಲ್ಲದ ಅಗತ್ಯವಿಲ್ಲದ ಏನನ್ನೂ ರೂಢಿಸಿಕೊಳ್ಳದಿದ್ದರೆ ಸರಳತೆ ತಾನಾಗೆ ಮೈಗೆ ಒಗ್ಗುತ್ – ಸಾವಯವ ಕೃಷಿಕ ನಾಡೋಜ ಎಲ್ ನಾರಾಯಣ ರೆಡ್ಡಿ
ವ್ಯವಸಾಯ ಉತ್ತಮ, ವ್ಯಾಪಾರ ಮಧ್ಯಮ, ನೌಕರಿ ಕೀಳು ‘ – ಸಾವಯವ ಕೃಷಿಕ ನಾಡೋಜ ಎಲ್ ನಾರಾಯಣ ರೆಡ್ಡಿ
‘ ಜೀವನವೆಂಬುದು ಸೈಕಲ್ ಸವಾರಿ ಇದ್ದಂತೆ. ಸಮತೋಲನ ಇರಬೇಕೆಂದರೆ ಚಲಿಸುತ್ತಲೇ ಇರಬೇಕು! ‘ – ಐನ್‌ಸ್ಟೀನ್‌
‘ ಸೋತವನಿಗೆ ಮಾತ್ರ ಗೆಲ್ಲಲು ಮತ್ತೊಂದು ಅವಕಾಶ ಇರುತ್ತದೆ. ‘ – ದ.ರಾ.ಬೇಂದ್ರೆ
‘ ಒಳ್ಳೆಯದನ್ನು ಮಾಡಿದರೆ ಸಾಲದು, ಅದನ್ನು ಒಳ್ಳೆಯ ರೀತಿಯಿಂದ ಮಾಡಬೇಕು.’ – ಚಾಣಕ್ಯ
‘ನೀವು ಬೇರೆಯವರಿಗಾಗಿ ಒಂದು ದೀಪ ಹಚ್ಚಿ. ಅದು ನಿಮ್ಮ ದಾರಿಗೂ ಬೆಳಕಾಗುತ್ತದೆ. ‘ – ಗೌತಮ ಬುದ್ಧ
‘ ನಮ್ಮ ಅಸುರಕ್ಷಿತ ಆಲೋಚನೆಗಳು ನಮಗೆ ಹಾನಿ ಮಾಡಿದಷ್ಟು, ಬದ್ಧ ವೈರಿಯೂ ಮಾಡಲಾರ ‘ – ಗೌತಮ ಬುದ್ಧ
‘ ಒಂದು ತಾಸು ಓದಿದರೆ ಎರಡು ತಾಸು ದುಡಿಯಿರಿ, ಮೂರು ತಾಸು ವಿಚಾರ ಮಾಡಿ. ‘ – ರಾಮಕೃಷ್ಣ ಪರಮಹಂಸ
‘ ಜೀವನ  ಪ್ರತಿಯೊಬ್ಬ ಜೀವಿಗೂ ದೇವರು ಕೊಟ್ಟ ವರ. ಅದನ್ನು ಅಲ್ಲಗಳೆಯಬೇಡಿ. ‘ – ಸ್ವಾಮಿ ವಿವೇಕಾನಂದ
‘ ಪ್ರಾಮಾಣಿಕರಿಗೆ ಜೀವನವೇ ಹೋರಾಟ. ಆದರೂ ಅದರಿಂದ ವಿಮುಖರಾಗಬಾರದು. ‘ – ಸ್ವಾಮಿ ವಿವೇಕಾನಂದ
‘ ನಿಮ್ಮ ನೈತಿಕ ಪ್ರವೃತ್ತಿ ಎಷ್ಟು ಉನ್ನತವಾಗಿರುತ್ತದೋ, ನಿಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ ‘ – ಸ್ವಾಮಿ ವಿವೇಕಾನಂದ
“ಶ್ರದ್ಧೆಯ ಅರ್ಥ ಮೂಢನಂಬಿಕೆಯಲ್ಲ” – ಸ್ವಾಮಿ ವಿವೇಕಾನಂದ
‘ಮಹಾ ಕಾರ್ಯಗಳು ಮಹಾ ತ್ಯಾಗದಿಂದ ಮಾತ್ರ ಸಾಧ್ಯ.’ – ಸ್ವಾಮಿ ವಿವೇಕಾನಂದ
‘ ನಿನ್ನನ್ನು ಪೀಡಿಸುವ ಸಂಕಟಗಳನ್ನು ನಗುನಗುತ್ತ ನಾಶಪಡಿಸು.’ – ಸ್ವಾಮಿ ವಿವೇಕಾನಂದ
‘ ಅಹಂಕಾರವಿಲ್ಲದ ಮನುಷ್ಯ ಯಾವ ಧರ್ಮಗ್ರಂಥವನ್ನೂ ಓದದೆ, ಯಾವ ಮಂದಿರವನ್ನೂ ಪ್ರವೇಶಿಸದೆ ಮೋಕ್ಷ ಪಡೆಯಬಹುದು. ‘ – ಸ್ವಾಮಿ ವಿವೇಕಾನಂದ
‘ ಸಾಮಾನ್ಯ ವಿವೇಚನೆಯು ಪ್ರಪಂಚದಲ್ಲಿ ಅತ್ಯಂತ ಅಸಾಮಾನ್ಯವಾದ ವಸ್ತು. ‘ – ಮಹಾಭಾರತ
‘ ನಿಲ್ಲುವುದೇ ಸಾವು, ಚಲಿಸುವುದೇ ಬಾಳು ‘ – ಕುವೆಂಪು
‘ ಇವತ್ತಿನ ಹಾರೈಕೆ, ನಾಳಿನ ಪೂರೈಕೆ, ಇಂದಿನ ಕನಸು, ನಾಳೆಯ ನನಸು. ‘  – ಕುವೆಂಪು
ಉತ್ತಮವಾದುದು ಶ್ರಮವಿಲ್ಲದೆ ಲಭಿಸದು. ಇಚ್ಛೆಯಿಲ್ಲದಿದ್ದರಂತೂ ಅದು ಸಾಧ್ಯವೇ ಅಲ್ಲ.’ – ಕುವೆಂಪು
‘ ಸತ್ಯಕ್ಕೆ ಹೆದರುವವನು ಅಥವಾ ನಾಚುವವನು ನಿಜವಾದ ಜಿಜ್ಞಾಸುವಾಗಲಾರನು.’ – ಕುವೆಂಪು
‘ ಪಡೆಯುವಷ್ಟನ್ನೇ ಪಡೆದರೆ ತೃಪ್ತಿ. ಅದಕ್ಕಿಂತಲೂ ಹೆಚ್ಚಿಗೆ ಪಡೆದರೆ ಬಹಳ ಹೊರೆ, ದುಃಖ. ‘ – ರವಿಂದ್ರನಾಥ ಟ್ಯಾಗೋರ್‌
‘ ಧರ್ಮ ಎಂಬುದು ಭಗವಂತ ಮತ್ತು ಮನುಷ್ಯನ ಬಗ್ಗೆ ಪ್ರೀತಿಯಲ್ಲದೆ ಬೇರೇನೂ ಅಲ್ಲ’ – ಶಂಕರಾಚಾರ್ಯ
‘  ಸಂಪ್ರದಾಯದ ಬಾವಿಯಲ್ಲಿ ತೇಲುವುದು ಒಳ್ಳೆಯದು , ಅದರಲ್ಲಿ ಮುಳುಗುವುದು ಆತ್ಮಹತ್ಯೆ ‘ – ಮಹಾತ್ಮ ಗಾಂಧಿ
‘ ಬದುಕಿ, ಇತರರನ್ನು ಬದುಕಲು ಬಿಡಿ ಎಂಬುದೇ ನಮ್ಮ ಜೀವನದ ಮಂತ್ರವಾಗಬೇಕು’ – ಮಹಾತ್ಮ ಗಾಂಧೀಜಿ
‘ ಉತ್ತಮ ಶಿಕ್ಷಣದ ಉದ್ದೇಶವೆಂದರೆ ಕೇವಲ ಕಲಿಸುವುದಲ್ಲ, ಕಲಿಯುವ ಆಸೆಯನ್ನೂ ಹುಟ್ಟಿಸುವುದು. ‘ –ಮಹಾತ್ಮ ಗಾಂಧಿ
ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದೂ ಬೇಸರದ್ದಾಗಿ ಕಾಣುವುದಿಲ್ಲ. ‘ – ಮಹಾತ್ಮಗಾಂಧಿ
” ಸತ್ಯವನ್ನು ಹೇಳಲೇಬೇಕು. ಯಾರಿಗೆ ನೋವು ಮಾಡಿದರೂ ಸತ್ಯ ಸತ್ಯವೇ. ” -ಗಾಂಧೀಜಿ
‘ ಓದಿ ಮರುಳಾಗಬಾರದು, ಓದದೆಯೂ ಮರುಳಾಗಬಾರದು, ಓದಿ ಹುರುಳಾಗಬೇಕು. ‘ – ವಿ.ಕೃ.ಗೋಕಾಕ್
 ಮರ್ತ್ಯದಲ್ಲಿ ನಿಂತು ಗೆಲ್ಲು, ಮರ್ತ್ಯವೇ ಒರೆಗಲ್ಲು. ‘ – ವಿ.ಕೃ. ಗೋಕಾಕ
‘ ಸ್ನೇಹಿತ ನಿಸರ್ಗ ಕೊಟ್ಟಿರುವ ಸೋದರ. ಸ್ನೇಹಿತರನ್ನು ಹೊಂದಿರುವವರೇ ನಿಜವಾಗಿ ಧನ್ಯರು. ‘ – ನಿರಂಜನ
‘ ನಾವು ಮಾಡುವ ಕಾರ್ಯವು ಕಾರಣಗಳ ಅನುರೂಪವಾಗಿರುತ್ತದೆ. ‘ – ಅನುಪಮಾ ನಿರಂಜನ
‘ ಪರಿಸ್ಥಿತಿಯು ಪ್ರತಿಕೂಲವಾಗಿರುವಾಗ ಮಾತನಾಡುವುದೂ ಸಾಹಸವೇ. ‘ – ರಂ.ಶ್ರೀ. ಮುಗಳಿ
‘ ವ್ಯಕ್ತಿತ್ವ ಸಾಧನೆ ಹೊಸ ಯುಗದ ಬೀಜಮಂತ್ರ.’ – ರಂ.ಶ್ರೀ.ಮುಗಳಿ
‘ ಜ್ಞಾನಕ್ಕೆ ವಿದ್ಯೆಯೂ, ವಿದ್ಯೆಗೆ ಓದು ಬರಹವೂ ತಳಹದಿ. ‘ – ಬಿಎಂಶ್ರೀ
‘ ಕಷ್ಟಪಟ್ಟು ದುಡಿಯಬೇಕೆನ್ನುವುದು ಜೀವನದ ಧ್ಯೇಯವಾದರೆ, ಅದೃಷ್ಟ ಎನ್ನುವುದು ಮನೆ ಬಾಗಿಲಿಗೆ ಬರಲಿದೆ. ‘ –ಗೋಲ್ಡ್ ಸ್ಮಿತ್
‘ ಪ್ರಾಣಿ ಜೀವನ ಮಿತವಾದುದು. ಮನುಷ್ಯ ಜೀವನ ಬಹುಮುಖವಾದದ್ದು.’ – ಶಿವರಾಮ ಕಾರಂತ
‘ ಮನುಷ್ಯ ವಿನಾಶದ ಅಂಚಿನಲ್ಲಿದ್ದಾಗಲೂ ಬದುಕಿನ ತಂತು ಎಟುಕಿತೆ ಎಂದು ಅರಸಬೇಕು. ‘ – ಶಿವರಾಮ ಕಾರಂತ
‘ ಅಭಾವದಿಂದ ವಸ್ತುಗಳ ಮಹತ್ವವು ಗೊತ್ತಾಗುತ್ತದೆ.’ – ಡಾ. ಶಿವರಾಮ ಕಾರಂತ
‘ ತಾನು ಚೆನ್ನಾಗಿ ಬದುಕಿದ್ದೇನೆ ಎಂದು ಧೈರ್ಯಪಡಬಲ್ಲವನು ಸಾವಿಗೆ ಅಂಜುವುದಿಲ್ಲ ‘ – ಶಿವರಾಮ ಕಾರಂತ
‘ ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ. ‘ – ಶಿವರಾಮ ಕಾರಂತ
‘ನಾವು ಕೊಡುವ ಉಪದೇಶಕ್ಕೂ ನಮ್ಮ ಜೀವನಕ್ಕೂ ಸಂಬಂಧ ಇಲ್ಲದೆ ಹೋದರೆ ನಮ್ಮ ಮಾತಿಗೆ ಬೆಲೆ ಬಾರದು.’ – ಶಿವರಾಮ ಕಾರಂತ
‘ ಕೊಳೆಯೇ ಕಾಣದ ಲೋಕವಿಲ್ಲ. ಕೊಳೆಯಿಲ್ಲದ ದೇಹವಿಲ್ಲ. ಬಂದ ಕೊಳೆಯನ್ನು ಆಗಾಗ ತೆಗೆದುಕೊಳ್ಳುವುದೇ ಚೊಕ್ಕತನದ ಲಕ್ಷಣ.’ – ಡಾ. ಶಿವರಾಮ ಕಾರಂತ
‘ ಮನುಷ್ಯನ ಬೆಳವಣಿಗೆಗೆ ಬೇಕಾದಷ್ಟು ಸ್ವಾರ್ಥ ಮಾತ್ರ ಅವನಲ್ಲಿ ಇರಬೇಕು. ಆದರೆ ಅದು ಮಿತಿ ಮೀರಬಾರದು. ‘ – ಶಿವರಾಮ ಕಾರಂತ
‘ ಎಷ್ಟು ಗಟ್ಟಿ ಮನುಷ್ಯನೇ ಇರಲಿ, ಹೊಗಳಿಕೆಗೆ ಕಿವಿಗೊಟ್ಟನೆಂದರೆ ಬಲೆಗೆ ಬೀಳುತ್ತಾನೆ.’ – ಶಿವರಾಮ ಕಾರಂತ
‘ ಮನುಷ್ಯನನ್ನು ಕಡೆಗಣಿಸಿ ಮಾಡಿದ ಯಾವುದೇ ಸತ್ಕರ್ಮ ನಿರರ್ಥಕ, ಅಪ್ರಯೋಜಕ. ‘ – ಕೆ.ಎಸ್.ನಿಸಾರ್ ಅಹಮದ್
‘ ಎಂತಹ ಕಟು ಪ್ರಸಂಗ ಬಂದರೂ ಎದೆಗುಂದಬಾರದು. ಇದೇ ಸುಖಿಯಾಗಿರುವುದರ ರಹಸ್ಯ. ‘ – ದ.ರಾ. ಬೇಂದ್ರೆ
” ನಿಜವಾದ ವಿದ್ಯೆ, ಮನುಷ್ಯನಿಗೆ ಆಲೋಚಿಸುವುದನ್ನು ಕಲಿಸುತ್ತದೆ. ” – ಹಾ.ಮಾ.ನಾಯಕ
‘ ಸಾಯುವುದು ಸುಲಭ, ಬಾಳುವುದು ದೊಡ್ಡ ಹೊಣೆಗಾರಿಕೆ. ‘ – ಎಸ್.ವಿ.ರಂಗಣ್ಣ
‘ ಹಿಂದೆ ಸರಿವುದೇ ಸಾವು! ಆತ್ಮಹತ್ಯೆ! ‘ – ಕುವೆಂಪು
‘ ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು. ‘ – ಡಿ.ವಿ. ಗುಂಡಪ್ಪ
‘ ಕಿವಿಕೊಡುವ ಸದ್ಬುದ್ಧಿ ಇದ್ದರೆ ನಾವು ನಮ್ಮ ಜೀವನದಲ್ಲಿ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು.’ – ಪೂರ್ಣಚಂದ್ರ ತೇಜಸ್ವಿ
‘ ತಾಳಿ ತಾಳಿ ಎನ್ನುವುದೇ ಮಂತ್ರ; ತಾಳ್ಮೆ ಇಲ್ಲದಿರೆ ಬಾಳೇ ಅತಂತ್ರ. ‘ – ಪು.ತಿ.ನ.
‘ ರೂಪ, ಕಣ್ಣುಗಳಿಗೆ ಸೀಮಿತ. ಗುಣ, ಆತ್ಮದವರೆಗೆ ತಲುಪುವ ಸಾಧನ.’ –  ತ್ರಿವೇಣಿ
‘ ಜಗತ್ತಿನಲ್ಲಿ ಹೇಳುವವರಿಗಿಂತ, ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು.’ – ಗಳಗನಾಥ
‘ ನಾನು ತಪ್ಪು ಮಾಡದಿದ್ದರೆ ನಾನು ಮಾನವನೇ ಅಲ್ಲ. ನೀನು ಕ್ಷಮಿಸದಿದ್ದರೆ ನೀನು ದೇವರೇ ಅಲ್ಲ. ‘ –ಎಸ್‌.ವಿ. ಪರಮೇಶ್ವರ ಭಟ್ಟ
“ಧನವಿದ್ದವರೇ ಧನಿಕರಲ್ಲ, ಜ್ಞಾನವೇ ಧನದ ನಿಧಿ ” – ಪಂಡಿತ ತಾರಾನಾಥ
‘ ವಿದ್ಯೆ ಒಂದೊಂದು ಕಡೆ ಒಂದೊಂದು ಬಗೆಯ ಹಣ್ಣು ಕೊಡುತ್ತದೆ. ‘ – ಪಂಜೆ ಮಂಗೇಶ ರಾವ್‌
‘ ಪ್ರತಿಭೆಗೆ ಶಾಸ್ತ್ರ ಜ್ಞಾನವಿದ್ದರೆ ವಜ್ರಕ್ಕೆ ಕುಂದಣವಿಟ್ಟಂತೆ ‘ – ತ.ರಾ.ಸು
‘ ದೈವ ಸಹಾಯವಿಲ್ಲದೆ ಜಯವಿಲ್ಲ, ಸ್ವಪ್ರಯತ್ನವಿಲ್ಲಗೆ ದೈವ ಸಹಾಯವೂ ಇಲ್ಲ . ‘ – ಡಿವಿಜಿ
‘ ಧರ್ಮ ಎನ್ನುವುದು ಲೋಕದ ಹಿತಕ್ಕಾಗಿಯೇ ಹೊರತು, ಲೋಕ ಧರ್ಮದ ಹಿತಕ್ಕಾಗಿ ಅಲ್ಲ. ‘  – ಡಿ.ವಿ.ಜಿ
‘ ಕಾಲದ ಮರಳಿನಲ್ಲಿ ಹೆಜ್ಜೆಗುರುತುಗಳನ್ನು ಬಿಡು, ಕಾಲನ್ನೆಳೆಯುತ್ತಾ ನಡೆಯಬೇಡ.’ – ಎ.ಪಿ.ಜೆ. ಅಬ್ದುಲ್‌ ಕಲಾಂ
‘ ಬುದ್ಧಿ–ಭಾವಗಳ ವಿದ್ಯುದಾಲಿಂಗನವೇ ಪ್ರತಿಭೆ. ‘ – ಕುವೆಂಪು
‘ ಭಕ್ತಿ, ಒಳ್ಳೆಯ ಮಾತುಗಳನ್ನಾಡಿಸಿದರೆ ಸಾಲದು. ಅದು, ಒಳ್ಳೆಯ ಕೆಲಸಗಳನ್ನು ಮಾಡಿಸಬೇಕು. ‘ – ಡಿ.ವಿ.ಜಿ.

ಸಸ್ಯೆ ಶಾಮಲೆಯರು

ನಮಸ್ಕಾರ ,

ನಮ್ಮ ಸುತ್ತಮುತ್ತ ಹಲವಾರು ಗಿಡಮರಗಳ್ಳನ್ನು ನೋಡುತ್ತೇವೆ, ಪ್ರತಿಯೊಂದು ಸಸ್ಯಕ್ಕೂ ಇದರ ಹೆಸರು ಏನು ಯಾರಾದರೂ ಕೇಳಿದರೆ ನಾವು ಹೆಸರು ಹೇಳಲು ಚಡಪಡಿಸುತ್ತೇವೆ .
ನಮ್ಮ ನೆರೆಹೊರೆಯ ಪ್ರಾಣ ವಾಯುವಿನ ಜನಕರು, ತನ್ನ ನೈಜ ಸೌಂದರ್ಯದಿಂದ  ತನು ಮನ ತಣಿಸುವ ಸಸ್ಯೆ ಶಾಮಲೆಯರನ್ನು ಈ ಲೇಖನದ ಮೂಲಕ  ಪರಿಚಯ ಮಾಡಿಕೊಳ್ಳೋಣ.
ಚಿತ್ರ ಕೃಪೆ :   ಅಂತರ್ಜಾಲ 

ಪಾರಿಜಾತ(paarijaata)
Coral Jasmine
ಸೇವಂತಿಗೆ(sevantige)
Chrysanthemum
ನಂದಿ ಬಟ್ಟಲು(Nandi buttalu)
Crape Jasmine
ನೈದಿಲೆ(naidile)
Water lilly
ಮಲ್ಲಿಗೆ(Mallige)
Jasmine
ಮಾಧವೀಲತೆ
ಸಂಪಿಗೆ(Sampige)
Champa
  ದೇವ ಕಣಗಿಲೆ(Deva kanagile)
Plumeria
ದುಂಡು ಮಲ್ಲಿಗೆ (Dundu Mallige)
Jasmine
ದಾಸವಾಳ (Dasavala)
Hibiscus
ಕಮಲ(Kamala)
Lotus
ಚೆಂಡು ಹೂವು(chendu hovu)
Marigold
ನಿತ್ಯ ಪುಷ್ಪ/ಕಣಗಿಲೆ (Nitya pushpa)

ಕನಕಾಂಬರ( kanakambara)
Crossandra
ಕಾಮಲತೆ (ಕೆಂಪು ಮಲ್ಲಿಗೆ) kaamalathe (kempu mallige)
Cypress Vine
ಕಣಗಿಲೆ (Kanagile)
ಗುಲಾಬಿ (Gulabi)
Rose